Wednesday, February 25, 2009

ಹಳ್ಳಿ, ಮುಂಜಾನೆಯ ಇಬ್ಬನಿ ಮತ್ತು ನವಿಲು

ಶ್ರೀನಾಥ್ ಬಾವ ಮತ್ತು ಮನೀಷಾ ರ ಮದುವೆಗೆ ಅಂಥ ೨ ದಿನ ಆಫೀಸ್ ಗೆ ರಾಜ ಹಾಕಿ ಊರಿಗೆ ಹೋಗಿದ್ದೆ. ಬಾವನ ಮನೆ ಇರುವುದು ಲಿಂಗನಮಕ್ಕಿ ಹತ್ತಿರ ಅರಳಗೋಡು. ಶರಾವತಿ ಅಭಯಾರಣ್ಯದ ಒಂದು ಭಾಗವಾಗಿರುವ ಪುಟ್ಟ ಊರು. ದಟ್ಟಕಾಡು, ವಿವಿಧ ಜಾತಿಯ ದೊಡ್ಡ ದೊಡ್ಡ ಮರಗಳು, ಕಾಡು ಪ್ರಾಣಿಗಳು ಇಲ್ಲಿ ಸಾಮಾನ್ಯ. ಎಷ್ಟೊಂದು ಸಾರಿ ರಸ್ತೆಯಲ್ಲಿ ಕಾಡುಕೋಣಗಳು ಎದುರಾಗುವುದಿದೆ..! ಮನೆಯ ಎದುರು ಅಡಿಕೆ ತೋಟ. ಪಕ್ಕದಲ್ಲಿ ಭತ್ತದ ಗದ್ದೆ..ಭತ್ತದ ಕಾಳುಗಳನ್ನು ತಿನ್ನಲು ಕಾಡು ಕೋಳಿ, ನವಿಲು, ಪಾರಿವಾಳ, ಗುಬ್ಬಿ ಮುಂತಾದ ಹಕ್ಕಿಗಳು ಬರುತ್ತವೆ. ಒಮ್ಮೊಮ್ಮೆ ನವಿಲು ಮನೆಯಂಗಳಕ್ಕೆ ಬರುವುದೂ ಉಂಟು.

ಮದುವೆಯ ಗಲಾಟೆ ಮುಗಿದ ಮರುದಿನ ಮುಂಜಾನೆ ಸ್ವಲ್ಪ ಬೇಗನೆ ಎದ್ದು ಗದ್ದೆಯ ಕಡೆ ನವಿಲು ನೋಡಲು ಹೋಗಿದ್ದೆ. ಮುಂಜಾನೆಯ ಇಬ್ಬನಿ ಸುತ್ತಲಿನ ಪರಿಸರವನ್ನು ಮುತ್ತಿಕೊಂಡಿತ್ತು...ಅಲ್ಲಿ ನನಗೆ ಸೆರೆಸಿಕ್ಕ ಕೆಲವು ಛಾಯಾಚಿತ್ರಗಳು...

ನವಿಲಿನ ಈ ಚಿತ್ರಗಳನ್ನು ಗೆಳೆಯ ವಿನಾಯಕ ಭಟ್ ಸೆರೆಹಿಡಿದಿದ್ದು... ನನಗೆ ತುಂಬಾ ಇಷ್ಟವಾಗಿದ್ದರಿಂದ ಈ ಪೋಸ್ಟಿನಲ್ಲಿ ಸೇರಿಸಿದ್ದೇನೆ.

ಹೊಸ ಬಾಳಿಗೆ ಹೆಜ್ಜೆ ಇಟ್ಟಿರುವ ನವಜೋಡಿಗೆ ಶುಭವಾಗಲಿ.....

6 comments:

Ittigecement said...

ಪ್ರಶಾಂತ್..

ತುಂಬಾ ಚೆನ್ನಾಗಿದೆ...

ನವಿಲಿನ ಫೋಟೊಗಳು ಬಹಳ ಇಷ್ಟವಾಯಿಯು...

ಅಭಿಮಂದನೆಗಳು...

Ittigecement said...

prashaanth

maretidde...

hosa jOdige nanna haardika shubhaashaya tiLisi...

thank you...

ಪಾಚು-ಪ್ರಪಂಚ said...

Thanks Prakashanna..

Nanna adrushtakke navilu gari bicchi "naneshtu sundara" endu fosu kottittu..!

khanditavagalu Nava jodige nimma shubhashaya tilasti.

shivu.k said...

ಪ್ರಶಾಂತ್,

ನೀವು ನನ್ನ ಬ್ಲಾಗಿಗೆ ಬಂದಿದ್ದು ನನಗೆ ಖುಷಿಯಾಯಿತು....ನೀವು ನನ್ನಂತೆ ಛಾಯಾಗ್ರಾಹಕರೆ! ಫೋಟೊಗಳು ಚೆನ್ನಾಗಿವೆ....ಇದನ್ನು ನೋಡಿ ಗೆಳೆಯ ನಾಗೇಂದ್ರ ಮತ್ಮರ್ಡು ನೆನಪಾಯಿತು.....

ಸಾದ್ಯವಾದರೆ ನನ್ನ ಉಳಿದ ಲೇಖನ ಓದಿ...
ನಿಮ್ಮ ಬ್ಲಾಗನ್ನು ಹಿಂಬಾಲಿಸುತ್ತೇನೆ.....

ಪಾಚು-ಪ್ರಪಂಚ said...

ಹಾಯ್ ಶಿವು ಸರ್,

ಫೋಟೋಗಳನ್ನು ಮೆಚ್ಚಿಕೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್. ನನಗೆ ಫೋಟೋಗ್ರಫಿ ನಲ್ಲಿ ಆಸಕ್ತಿ ಇದೆ. ಊರೂರು ತಿರುಗುವುದು ನನ್ನ ಹವ್ಯಾಸ. ಹೆಚ್ಚಿನ ಫೋಟೋಗಳನ್ನು ನನ್ನ ಮೊಬೈಲ್ ನಲ್ಲಿ ತೆಗದಿದ್ದು, ನನ್ನ ಬಳಿ ಕ್ಯಾಮೆರಾ ಇಲ್ಲ...!!!
ನಿಮ್ಮ ಎಲ್ಲಾ ಲೇಖನಗಳನ್ನು ಓದಿದೆ, ತುಂಬಾ ಇಷ್ಟ ಆದವು...

ಅಗಾಗ ಬರುತ್ತಿರಿ..

ವಂದನೆಗಳು
ಪ್ರಶಾಂತ್ ಭಟ್

Leena said...

ಅದೃಷ್ಟ ನಿಮ್ದು! ನವಿಲಿನ ಇಂತಹ ಪೋಸು ಸಿಕ್ಕಿದೆ ಅಂದ್ರೆ!