Wednesday, June 17, 2009

ಸ್ವಾತಂತ್ರ್ಯ ಉದ್ಯಾನವನ

ಮೇ ೩೧, ಭಾನುವಾರ, ನಾನು ಅರವಿಂದ, ಸುಹಾಸ್ ಮತ್ತು ಕಿರಣ್ ಹಳೆಯ ಕಾರಾಗೃಹದಲ್ಲಿ ಒಂದು ಸಂಜೆಯನ್ನು ಕಳೆದೆವು...!
ಆಗಿನ ಕೇಂದ್ರ ಕಾರಗೃಹವೇ ಈಗ ಸುಂದರ ಸ್ವಾತಂತ್ರ್ಯ ಉದ್ಯಾನವನವಾಗಿದೆ...!


ನಮ್ಮ ಬೆಂಗಳೂರಿನ ಹೃದಯಭಾಗದಲ್ಲಿರುವ ಕೇಂದ್ರ ಕಾರಾಗೃಹವನ್ನ ೧೮೬೫-೬೬ ರಲ್ಲಿಯೇ ಕಟ್ಟಲಾಯಿತು. ಸುಮಾರು ೨೧ ಎಕರೆ ಜಾಗದಲ್ಲಿ ವಾಚ್ ಟವರ್, ಬ್ಯಾರಕ್ ಗಳು, ಆಸ್ಪತ್ರೆ, ವರ್ಕ್-ಶಾಪ್ ಮೊದಲಾದ ಕಟ್ಟಡಗಳು ಇದ್ದವು. ಸದೃಢವಾದ ಎತ್ತರ ಗೋಡೆಯು ಇಡೀ ಪ್ರದೇಶವನ್ನು ಸುತ್ತುವರೆದಿದೆ.


ಈ ಕಾರಾಗೃಹವು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಿದಾಗ ಸರಕಾರದವರು ಇದನ್ನ ಉದ್ಯಾನವನವನ್ನಾಗಿ ಪರಿವರ್ತಿಸಿದರು. ೧೫ ಎಕರೆ ಸ್ವಾತಂತ್ರ್ಯ ಉದ್ಯಾನವನವನ್ನು ಸುಮಾರು ೧೭.೩೫ ಕೋಟಿ ರೂಗಳ ಮೊತ್ತದಲ್ಲಿ ನಿರ್ಮಿಸಲಾಗಿದೆ. ಲಂಡನ್ ನ ಹೈಡ್ ಉದ್ಯಾನವನದ ಮಾದರಿಯಲ್ಲಿ ೬ ಎಕರೆ ಪ್ರತ್ಯೇಕ ವಿಶಾಲವಾದ ಪ್ರದೇಶದಲ್ಲಿ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿದೆ...ಇದರಿಂದ ನಗರ ಕೇಂದ್ರದಲ್ಲಿ ಪ್ರತಿಭಟನೆ ಮತ್ತು ಮೆರವಣಿಗೆ ಇಂದಾಗಿ ಸಂಚಾರ ಅಸ್ತವ್ಯಸ್ತ ಕಡಿಮೆ ಆಗಲಿದೆ..!!! :-)


ಉದ್ಯಾನವನದ ಮುಖ್ಯ ಉದ್ದೇಶ ನಗರದ ಹೃದಯ ಭಾಗದಲ್ಲಿ ಹಸಿರನ್ನು ಸೃಷ್ಟಿಸುವುದು. ಇಲ್ಲಿನ ವಾಸ್ತುಶಿಲ್ಪ ಅಧ್ಬುತವಾಗೆನು ಇಲ್ಲ. ಆದರೂ ಮನಸ್ಸಿಗೆ ಹಿಡಿಸುತ್ತದೆ. ಹಸಿರು ಮರಗಳು, ಹೂವಿನ ಗಿಡಗಳು, ಹಾಸು ಎಲ್ಲವು ಸುಂದರ. ಹಾಗೆಯೇ ಚಿಣ್ಣರಿಗೆ ಆಡಲು ಸಾಕಷ್ಟು ಸ್ಥಳಾವಕಾಶ ಇದೆ, ಅದಕ್ಕಾಗಿಯೇ ವಿಶೇಷ ಆಟಿಕೆಗಳೂ ಇದೆ. ಕೈದಿಗಳು ಇದ್ದ ಕೊಠಡಿಯನ್ನು ಹಾಗೆಯೇ ಇಡಲಾಗಿದೆ.. ವೀಕ್ಷಣಾ ಗೋಪುರ, ಸಮಾನಾಂತರ ಗೋಡೆ ವಿಶೇಷ ಆಸಕ್ತಿಯನ್ನು ಹುಟ್ಟಿಸುತ್ತದೆ. ರಂಗಮಂದಿರ ಸದುಪಯೋಗವಾದರೆ ಸುಂದರ ಸಂಜೆಯನ್ನ ಸೃಷ್ಟಿಸಬಹುದು...!! ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ.


ನಮ್ಮ ಬೆಂಗಳೂರಿನಲ್ಲೂ ಇಂತಹ ಸುಂದರ ವಿಶಾಲವಾದ ಹಸಿರು ತಾಣ ಇರುವುದು ಆಶ್ಚರ್ಯ. ಉಳಿದ ಉದ್ಯಾನವನದಂತೆ ಹಾಳಾಗುವ ಮೊದಲು ಒಮ್ಮೆ ಕುಟುಂಬ ಸಮೇತ ಹೋಗಿ ಬನ್ನಿ...!

12 comments:

Ittigecement said...

ಪ್ರಶಾಂತ್....

ಒಳ್ಳೆಯ ಸ್ಥಳದ ಪರಿಚಯ ಮಾಡಿಕೊಟ್ಟಿದ್ದೀರಿ...
ಖಂಡಿತ ನೋಡಲೇಬೇಕಾದದ್ದು..
ನೋಡಿ ಬರುವೆ...

ಚಂದದ ಫೋಟೊಗಳು...
ಉಪಯುಕ್ತ ಮಾಹಿತಿಗಳು...

ತುಂಬಾ ಥ್ಯಾಂಕ್ಸ್....

ಪಾಚು-ಪ್ರಪಂಚ said...

ಹಾಯ್ ಪ್ರಕಾಶಣ್ಣ

ಸಧ್ಯಕ್ಕಂತೂ ಉದ್ಯಾನವನ ಚೊಕ್ಕದಾಗಿ, ಸುಂದರವಾಗಿದೆ. ಆದಷ್ಟು ಬೇಗ ಭೇಟಿ ನೀಡಿ ಅದರ ಸೊಬಗನ್ನು ನೋಡಿ ಬನ್ನಿ.
ಮೆಚ್ಚುಗೆಗೆ ತುಂಬಾ ಥ್ಯಾಂಕ್ಸ್..

-ಪ್ರಶಾಂತ್

Shweta said...

Hello Prashanth,

Aanu bhaala dinadinda adra bagge baryo heli plan haakta eddidde..pratidivsa buss nalli barakaadru allige hogo ondu dina heli andu katte ..aaje elyagittu....

Nin blog link na nan blog nalli kodte .Superb photos.
Nice write up.

Thanks!
ShwetA

Arvi said...

leekhana acchukattagi mudi bandidhe. Kaidhigalidda jagavannu chendadha sobagina udyanavannagi madiruva sarkarakke krutagnathegalu. Nagarikaru edannu estee chennagi nodikollalendu ashisuve.

nadig.pramod said...

hiii prashanth nijavagiyu idu ondu prekshaneeya stala,illiruva prathi godeyu namma swatantra yodharu patta kastagala kate heluttave. .

ಪಾಚು-ಪ್ರಪಂಚ said...

Hello Shweta madam..

Sumne buss nalli hogta nodidre saltille...ond sala ellarnu karkandu hogu..!! Nin blog nallu barli ondu postu...!!

Thank you very much..!!

ಪಾಚು-ಪ್ರಪಂಚ said...

Hi Arvi,

Tumbaa thanksappa ninna mecchugege..!

Hi Pramoda..
Nija, illina pratiyondu kothadiyu namma horatagarara katheyannu avara dhairya sahasavannu heluttave..!! idu namage hemme..!

shivu.k said...

ಪ್ರಶಾಂತ್,

ನಿತ್ಯಾ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ ಇನ್ನೂ ಒಳಗೆ ಹೋಗಲು ಮನಸ್ಸಾಗಿಲ್ಲ. ಏಕೋ ಗೊತ್ತಿಲ್ಲ...ಬಹುಷಃ ಹಳೇ ಕಾರಗೃಹವೆನ್ನುವ ಭಯವಿರಬಹುದೇ....

ನಿಮ್ಮ ಫೋಟೋಗಳು ತುಂಬಾ ಚೆನ್ನಾಗಿವೆ....ಸಾದ್ಯವಾದಷ್ಟು ಬೇಗ ಒಳಗೆ ಹೋಗುತ್ತೇನೆ....

ಪಾಚು-ಪ್ರಪಂಚ said...

ಶಿವೂ ಅವರೇ,

ಚೆನ್ನಾಗಿದೆ ನಿಮ್ಮ ಟಿಪ್ಪಣಿ... ಹಾಗೆ ಆಗಲಿ ಆದಷ್ಟು ಬೇಗ ಕಾರಾಗೃಹದ ಒಳಗೆ ಹೋಗಿ...!!! ಹ್ಹ ಹ್ಹ..!!

-ಪ್ರಶಾಂತ್ ಭಟ್

Mr. Shree said...

hi paachu,

the photos are very nice, i wil read it indetails to add few more comments to it....

Keep moving ... Cheers,

Shree

Amit Hegde said...

oh cool.... i wanted to find out whats there in the freedom park...! thinks for the info..

http://eyeclickedit.blogspot.com/

Unknown said...

tnx brother......enta olle baraha.... nanu yavaglu busnalli hoogta noodtiddi illenta iddikku svatantrya udyanavana heeliddu enta iddikku illi heeliii.... tnx 4 giving d information....