Saturday, July 11, 2009

ಮೈಸೂರಲ್ಲಿ ಒಂದು ದಿನ

೧೬ ಮೇ ಶನಿವಾರ ಸಂಜೆ "ಸವಾರಿ" ಫಿಲಂ ನೋಡಿ ಮೈಸೂರ್ ರೋಡಿನಲ್ಲಿ ಧಾಭ ಒಂದಕ್ಕೆ ಊಟಕ್ಕೆ ಹೋಗಿದ್ದೆವು. ತಂದೂರಿ ರೋಟಿ, ಬಿಂಡಿ ಪಲ್ಯ, ದಾಲ್ ಫ್ರೈ ತಿಂದು ಕೊನೆಯಲ್ಲಿ ಮೊಸರನ್ನ ಊಟಮಾಡಿ, ಬೀಡ ಸವಿಯುತ್ತಿರಬೇಕಾದರೆ ಮೈಸೂರಿಗೆ ಹೋಗುವ ವಿಷಯ ನಮ್ಮ ಗುಂಪಿನಲ್ಲಿ ಸುಳಿದಾಡಿತು. ಮರುದಿನ ಭಾನುವಾರ. ಯಾವ ಪರ್ಸನಲ್ ಕೆಲಸವೂ ಇರಲಿಲ್ಲದ್ದರಿಂದ ಮೈಸೂರಿಗೆ ಹೋಗಿ ಬರುವ ಪ್ಲಾನ್ ಧೃಢವಾಯಿತು. ಹಾಗೆಯೇ ಅಲ್ಲಿಂದ ನೇರವಾಗಿ ಮೈಸೂರ್ ಕಡೆ ಕಾರನ್ನು ತಿರುಗಿಸಿದೆ. ಹರಿಹರನ್ ಅವರ ಮಧುರ ಗಝಲ್ ಕೇಳುತ್ತಾ, ನೀರಳ ರಾತ್ರಿಯ ತಣ್ಣನೆಯ ಗಾಳಿಯಲ್ಲಿ, ನುಣುಪಾದ ಮೈಸೂರು ರಸ್ತೆಯಲ್ಲಿ ಕಾರನ್ನು ಓಡಿಸುವ ಮಜವೇ ಬೇರೆ...!!ಮೈಸೂರಿನಲ್ಲಿ ನನ್ನ ಕಸಿನ್ ರಂಗನ ಮನೆಗೆ ಹೋದಾಗ ರಾತ್ರಿ ೩ ಗಂಟೆ ಆಗಿತ್ತು. ಸ್ವಲ್ಪ ಹೊತ್ತು ಹರಟೆ ಹೊಡೆದು ಹಾಗೆ ಬೆಚ್ಚಗಿನ ನಿದ್ದೆಗೆ ಜಾರಿದೆವು.

ಭಾನುವಾರ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಕರ್ಮಾದಿಗಳನ್ನು ಮುಗಿಸಿ, ಚಾಮುಂಡಿ ದೇವಿಯ ದರ್ಶನಕ್ಕೆ ಚಾಮುಂಡಿ ಬೆಟ್ಟಕ್ಕೆ ಹೋದೆವು. ದೇವಾಲಯವು ಆಗಲೇ ಭಕ್ತರಿಂದ ತುಂಬಿತ್ತು. ಸಾಲಿನಲ್ಲಿ ನಿಂತು ದೇವಿಯ ದರ್ಶನ ಭಾಗ್ಯ ಪಡೆದೆವು. ಅಲಂಕೃತ ಮಂದಸ್ಮಿತ ಚಾಮುಂಡಿ ದೇವಿಯ ದರ್ಶನ ನಿಜಕ್ಕೂ ಮನಸ್ಸಿಗೆ ಪುಳಕ... ಧನ್ಯತೆಯ ಭಾವ...!!


ಕೃಷ್ಣಶಿಲೆಯ ಬೃಹದಾಕಾರದ ನಂದಿಯು ಒಂದೇ ಕಲ್ಲಿನಿಂದ ಕೆತ್ತಲ್ಪಟ್ಟಿದ್ದು. ವಾಡಿಕೆಯಂತೆ ಶಿವನ ದೇವಸ್ಥಾನದ ಮುಂದೆ ನಂದಿಯನ್ನ ಪ್ರತಿಸ್ಥಾಪಿಸಲಾಗಿರುತ್ತದೆ. ಆದರೆ ಇಲ್ಲಿ ಶಿವನ ವಿಗ್ರಹ ಇಲ್ಲ..! ಶಿವ ಮತ್ತು ಪಾರ್ವತಿಯ ಮಧ್ಯೆ ಜಗಳ ನಡೆದು, ಶಿವನು ಮುನಿಸಿಕೊಂಡು ಯಾರ ಕಣ್ಣಿಗೂ ಕಾಣಿಸ ಕೂಡದೆಂದು ಮಲೆ-ಮಹದೇಶ್ವರ ಬೆಟ್ಟಗಳ ಮಧ್ಯೆ ವಾಸವಾಗುತ್ತಾನೆ. ಶಿವನನ್ನು ಹುಡುಕುವ ಸಲುವಾಗಿ ಪಾರ್ವತಿಯು ಚಾಮುಂಡಿ ಬೆಟ್ಟಕ್ಕೆ ಬಂದು ಹುಡುಕುತ್ತಾಳೆ, ಅದರೂ ಶಿವನು ಕಾಣಿಸುವುದಿಲ್ಲ. ನಂದಿಯು ಅರ್ಧ ಬೆಟ್ಟವನ್ನು ಹತ್ತಿ ಅಲ್ಲಿಯೇ ವಿರಮಿಸುತ್ತಾನೆ ಎಂಬ ಪುರಾಣ ಕಥೆಯು ಪ್ರಚಲಿತವಾಗಿದೆ.

ನಂದಿಯ ಸುಂದರ ವಿಗ್ರಹವು ೪.೭ ಮೀ ಎತ್ತರ ಮತ್ತು ೬.೧೦ ಮೀ ಉದ್ದ ಇದೆ. ಶಿವರಾತ್ರಿ ಮತ್ತು ಮಸ್ತಕಾಭಿಷೇಕ ದಿನಗಳಲ್ಲಿ ವಿಶೇಷ ಪೂಜೆ ಇರುತ್ತದೆ.

ನಂದಿ ವಿಗ್ರಹದ ಬಳಿ ಸಿಕ್ಕಿದ ಈ ಬಾಲವೇಷದ ಈ ಹುಡುಗ ಸುಂದರವಾಗಿ ಹಾಡುತ್ತಿದ್ದ..!

ಬೆಳಗಿನ ಉಪಹಾರಕ್ಕೆಂದು ಪ್ರಸಿದ್ಧ "ಮೈಲಾರಿ" ದೋಸೆ ಹೋಟೆಲಿಗೆ ಹೋಗಿದ್ದೆವು. ಬೆಂಗಳೂರಿನ ' MTR ' ಮತ್ತು ವಿದ್ಯಾರ್ಥಿ ಭವನದಂತೆಯೇ ಮೈಸೂರಿನಲ್ಲಿ ಮೈಲಾರಿ ಹೋಟೆಲು ಬೆಣ್ಣೆ ದೋಸೆಗೆ ಪ್ರಸಿದ್ದಿ. ಬಾಯಲ್ಲಿ ನೀರೂರಿಯುವ ಅಪ್ಪಟ ಬೆಣ್ಣೆಯ ಗರಿ ಗರಿ ದೋಸೆ..ರುಚಿಯಾದ ಕೊಬ್ಬರಿ ಚಟ್ನಿ! ಒಬ್ಬೊಬ್ಬರೂ ೪-೫ ದೋಸೆ ತಿಂದು ತೇಗಿದೆವು..!

ಕಾರಂಜಿಕೆರೆ ಸುಂದರ ಮತ್ತು ಪ್ರಶಾಂತವಾದ ತಾಣ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಕಾರಂಜಿ ಕೆರೆಯು ಸುಮಾರು ೯೦ ಎಕರೆ ವಿಸ್ತೀರ್ಣದಲ್ಲಿದೆ. ದೋಣಿ ವಿಹಾರ, ಚಿಟ್ಟೆ ವನ, ಪಕ್ಷಿವನ, ಹಸಿರು ಗಿಡಮರಗಳು, ಸುಂದರ ಹುಲ್ಲುಹಾಸು ಇಲ್ಲಿನ ವಿಶೇಷ.

ಪಕ್ಷಿವನ ಭಾರತದಲ್ಲಿಯೇ ಅತಿ ಉದ್ದದ ಹಾಗೂ ದೊಡ್ಡದಾದ ಪ್ರದೇಶವಾಗಿದೆ. ವಿವಿಧ ಜಾತಿಯ ಹಕ್ಕಿಗಳು, ಚಂದದ ಚಿಟ್ಟೆಗಳು ಮನಸೂರೆಗೊಳಿಸುತ್ತವೆ. ಪ್ರಶಾಂತವಾದ ಕೆರೆಯು ದೋಣಿ ವಿಹಾರಕ್ಕೆ ಮುದ ನೀಡುತ್ತದೆ.

ನಿಸರ್ಗ ಪ್ರಿಯರಿಗೆ, ಛಾಯಾಗ್ರಾಹಕರಿಗೆ ಇದು ಹೇಳಿ ಮಾಡಿಸಿದ ಜಾಗ....ಹಾಗೇಯೇ ಪ್ರೇಮಿಗಳಿಗೂ ಕೂಡ...!! ಕಾರಂಜಿ ಕೆರೆಯು ಮೈಸೂರು ಪ್ರಾಣಿಸಂಗ್ರಹಾಲಯ ಪ್ರಾಧಿಕಾರದ ಉಸ್ತುವಾರಿಯಲ್ಲಿದೆ. ಇಲ್ಲಿನ ಸ್ವಚ್ಛತೆ ನಿಜಕ್ಕೂ ಪ್ರಶಂಸಾರ್ಹ...!!


ಮೈಸೂರು ವಿಶ್ವವಿದ್ಯಾಲಯದ ಹತ್ತಿರ ಇರುವ "ಮನೆ" ಎಂಬ ಹೋಟೆಲಿನಲ್ಲಿ ಸೊಗಸಾದ ಜೋಳದ ರೊಟ್ಟಿ ಊಟ ಮುಗಿಸಿ " ಬಲಮುರಿ" ಗೆ ಹೋದೆವು. ಈ ತಾಣ ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಕಾವೇರಿ ನದಿ ತೀರದ, ಹೆಚ್ಚು ಅಪಾಯವೂ ಇಲ್ಲದ ಯಾವಾಗಲೂ ಪ್ರವಾಸಿಗರಿಂದ ತುಂಬಿರುವ ಜಾಗ. ಇಲ್ಲಿ ವರ್ಷಪೂರ್ತಿ ನೀರಿರುವುದರಿಂದ ಪ್ರವಾಸಿಗರು ಜಾಸ್ತಿ. ನದಿಯು ತುಂಬಿದಾಗ ಸಣ್ಣ ಅಣೆಕಟ್ಟೆಯ ಮೇಲಿಂದ ನೀರು ಹರಿದು ಸುಂದರ ಜಲಪಾತವನ್ನು ಕೂಡ ಸೃಷ್ಟಿಸುತ್ತದೆ.

ಗಣೇಶನ ಸನ್ನಿಧಿಯಲ್ಲಿ ನಮಸ್ಕರಿಸಿ, ಯಾವುದೇ ಅಪಾರ ಬರದಿರಲೆಂದು ಪ್ರಾರ್ಥಿಸಿ, ತೃಪ್ತಿಯಾಗುವಷ್ಟು ಸಮಯ ನೀರಿನಲ್ಲಿ ಈಜಾಡಿದೆವು!!!
ಅಲ್ಲಿಂದ, ನಂಜನಗೂಡಿನ ಪ್ರಸಿದ್ಧ ಈಶ್ವರ ದೇವಾಲಯದ ದರ್ಶನಕ್ಕೆಂದು ಹೊರಟೆವು. ವಾಹನ ದಟ್ಟಣೆಯಿಂದಾಗಿ ನಂಜನಗೂಡು ತಲುಪುವದರೊಳಗೆ ಕತ್ತಲಾಗಿತ್ತು. ಗೋಪುರ, ಸುಂದರ ಕಲ್ಲಿನ ಕೆತ್ತನೆಗಳು, ಅದ್ಭುತ ಕುಸುರಿಯ ವಿಗ್ರಹಗಳು ಇಲ್ಲಿ ನೋಡಲೇ ಬೇಕಾದುದು.

ಕತ್ತಲಾದ್ದರಿಂದ ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲಾಗಲಿಲ್ಲ, ಕಾಮರದಲ್ಲೂ ಸೆರೆಹಿಡಿಯಲಾಗಲಿಲ್ಲ. ಮತ್ತೊಮ್ಮೆ ಇಲ್ಲಿಗೆ ಬರಲೇ ಬೇಕು..!!

ನಗರದ ಮಧ್ಯಭಾಗದಲ್ಲಿರುವ "ಫುಡ್ ಕೋರ್ಟ್" ನಲ್ಲಿ ರಾತ್ರಿಯ ಊಟ ಮುಗಿಸಿ, ಸುಂದರ ದಿನವೊಂದನ್ನು ಕಳೆದಿದ್ದಕ್ಕೆ ಮೈಸೂರಿಗೊಂದು ವಿದಾಯ ಹೇಳಿ, ಬೆಂಗಳೂರಿನ ಹೈವೆನಲ್ಲಿ ಕಾರು ಚಲಾಯಿಸಿದೆ..! ಮತ್ತೆ ಅದೇ ಹರಿಹರನ್ ಗಝಲ್...!!

17 comments:

ವನಿತಾ / Vanitha said...

ಸೊಗಸಾದ ನಿರೂಪಣೆ. ಮತ್ತೊಮ್ಮೆ ಮೈಸೂರಿಗೆ ಹೋದಷ್ಟೇ ಆನಂದ ವಾಯಿತು.ಮೈಸೂರಲ್ಲಿದ್ದಷ್ಟು ದಿನ ಮೈಲಾರಿ ಹೋಟೆಲ್ ನಮ್ಮ ಇಷ್ಟದ ಹೋಟೆಲ್ ಆಗಿತ್ತು.

ಪಾಚು-ಪ್ರಪಂಚ said...

ವನಿತಾ,

ಪ್ರವಾಸ ಕಥನ ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್...! ಮೈಲಾರಿ ದೋಸೆ ನಿಜಕ್ಕೂ ಸೊಗಸಾಗಿತ್ತು..!! ಇನ್ನೂ ಬಾಯಲ್ಲಿ ನೀರೂರಿಯುತ್ತೆ .

-ಪ್ರಶಾಂತ್ ಭಟ್

shivu.k said...

prasanth,

photogalu super...mailari hotelina chatni super agiruthe alva....

mathe chamundi bettadalli kaleda varsha hegidaga nanu tayi-magu photo klikkisiddhe. adu june tingala mayuradali cover paginali badhidhe sadyavadare nodi...

thanks..

ಪಾಚು-ಪ್ರಪಂಚ said...

Shivu sir,

mysooru tirugidashtoo saaladu, eshtondu sthalagalu ive alli.

Bengalooring tumbaa hattirada super place..!!

Khandita nimma photo noduve.

Thannyavaadagalu..

ಸುಧೇಶ್ ಶೆಟ್ಟಿ said...

ಹಲೋ ಪ್ರಶಾ೦ತ್...

ನಿಮ್ಮ ಬ್ಲಾಗಿಗೆ ನನ್ನ ಮೊದಲ ಬೇಟಿ...

ಫೋಟೋಗಳನ್ನು ನೋಡಿದ ಮೇಲೆ ಆ ಜಾಗಗಳನ್ನು ನೋಡಲೇ ಬೇಕೆನಿಸಿದೆ... ತು೦ಬಾ ಚೆನ್ನಾಗಿ ಬ೦ದಿದೆ ಫೋಟೋಗಳು... ಹಾಗೆಯೇ ಶಿವನ ಸಮುದ್ರದ ಫೋಟೋಗಳು ಕೂಡ...

ಪಾಚು-ಪ್ರಪಂಚ said...

Hai Sudhesh..

Paachu prapanchakke swagata.

Nimma mecchugeya pratikriyege dhanyavaadagalu..

Shivanasamudra nodalu idu olleya kaala..!! omme hogi banni..!

-Prashanth Bhat

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಶಾಂತ್,
ಮೈಸೂರು ಪ್ರವಾಸ ಸೊಗಸಾಗಿದೆ.ಚಿತ್ರಗಳೂ ಸಹ. ಮತ್ತೊಮ್ಮೆ ಕುಟುಂಬ ಸಮೇತೆ ಹೋಗುವ ಆಸೆ ಮೂಡಿದೆ, ನಿಮ್ಮ ಬ್ಲಾಗಿಂದ.ಧನ್ಯವಾದಗಳು.

ರೂpaश्री said...

ಚೆಂದದ ಫೋಟೋಗಳು ಮತ್ತು ಸೊಗಸಾದ ವಿವರಣೆ.
ಮೈಸೂರು, ಬಲಮುರಿ,ನಂಜನಗೂಡು ನೋಡಿದ್ದೇನೆ, ಆದ್ರೆ ಕಾರಂಜಿಕೆರೆ ನೋಡಿಲ್ಲ. ಈಗ ನಿಮ್ಮೀ ಫೋಟೋಗಳನ್ನು ನೋಡಿದ ಮೇಲೆ ಆ ಜಾಗವನ್ನು ನೋಡಲೇ ಬೇಕೆನಿಸಿದೆ:)

ಪಾಚು-ಪ್ರಪಂಚ said...

ಮಲ್ಲಿಕಾರ್ಜುನ್ ಅವರೇ,

ಕಾರಂಜಿಕೆರೆಯಲ್ಲಿನ ಚಿಟ್ಟೆ ಪಾರ್ಕು ನಿಮಗೆ ಖಂಡಿತ ಖುಷಿ ಕೊಡುತ್ತದೆ..ಒಮ್ಮೆ ಕುಟುಂಬ ಸಮೇತ ಹೋಗಿಬನ್ನಿ..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

ಪಾಚು-ಪ್ರಪಂಚ said...

ಹಾಯ್ ರೂಪಶ್ರೀ,

ಕಾರಂಜಿ ಕೆರೆಯ ಸ್ವಚ್ಚತೆ, ಶಾಂತವಾದ ಪರಿಸರ ಮನಸ್ಸಿಗೆ ಮುದನೀಡುತ್ತದೆ.

ಬರವಣಿಗೆ ಮತ್ತು ಫೋಟೋಗಳನ್ನು ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್..!!

ಯಜ್ಞೇಶ್ (yajnesh) said...

ಪ್ರಶಾಂತ್,

ಲೇಖನ ಮತ್ತು ಫೋಟೋಗಳು ತುಂಬಾ ಚೆನ್ನಾಗಿ ಬೈಂದು

Unknown said...

oey. ಮಸ್ತಾಗಿದ್ದಲೇ..

ಪಾಚು-ಪ್ರಪಂಚ said...

Hi Yajnesh,

Thank you sir..! Heege irali ninna protsaha!!


Hi Sree,

Thanks le..!! Batta iro..!

-Prashanth

Shweta said...

Hello Bhatre....as usual photos cholo eddu .eesaare bere tara bariyo.Just for a change...Try something different !!!try out!
naanu mysore ge hogo maadidde.yaavaga gottile.!!!
-ShwetA

ಪಾಚು-ಪ್ರಪಂಚ said...

Hii Shweta..

I will definitely try..!!
next trip bagge swalpa different aagi bariyale prayatna maadti..!!

Thank you soo much for your suggestion..!!

ಜಿ.ಎಸ್.ಬಿ. ಅಗ್ನಿಹೋತ್ರಿ said...

ಚೆನ್ನಾಗಿದೆ ನಿಮ್ಮ ಛಾಯಾಚಿತ್ರಗಳು. ಮೈಸೂರ್ ಅಂದ್ರೆ ಹಾಗೇ.. ಛಾಯಾಚಿತ್ರಕ್ಕೆ ಹೇಳಿ ಮಾಡಿಸಿದ ಸ್ಥಳ.

ಪಾಚು-ಪ್ರಪಂಚ said...

ಅಗ್ನಿ ಸರ್,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು..ಹೀಗೆ ಬರುತ್ತೀರಿ..