ಮಂಚನಬೆಲೆಯ ಸುಂದರ ಪರಿಸರ ಸಹಜವಾಗಿಯೇ ಇಷ್ಟ ಆಯಿತು. ಕಳೆದ ಬಾರಿ ಇದ್ದಕ್ಕೂ ಜಾಸ್ತಿ ಪ್ರಮಾಣ ನೀರಿತ್ತು. ಇನ್ನೊಂದು ಮುಖ್ಯ ಅಂಶ ಎಂದರೆ ಸುತ್ತಲಿನ ಪರಿಸರ ಪ್ಲಾಸ್ಟಿಕ್ ಮುಕ್ತವಾಗಿತ್ತು...! ಪಕ್ಕದಲ್ಲಿಯೇ ಮಿಲಿಟರೀ ಕ್ಯಾಂಪ್ ಇರುವುದರಿಂದ ಹೆಚ್ಚಿನ ಗಲಾಟೆ ಇರಲಿಲ್ಲ. ಬೈಕ್ ನಿಲ್ಲಿಸಿ ಸುತ್ತಲೂ ಓಡಾಡಿದೆವು. ಚಿಕ್ಕದಾಗಿ ಚೊಕ್ಕವಾಗಿರುವ ಮಂಚಾನಬೆಲೆ ಪರಿಸರ ವಾರಾಂತ್ಯ ಕಳೆಯಲಿಕ್ಕೆ ಅತ್ಯಂತ ಸೂಕ್ತ.
ಮಂಚನಬೆಲೆ ಇಂದ ಹೊರಟು ರಾಮನಗರ ತಲುಪಿ ಅಲ್ಲಿಂದ ಮುಂದೆ ಮೈಸೂರು ಹೆದ್ದಾರಿ ಹಿಡಿದೆವು. ಕಾಮತ್ ಲೋಕರುಚಿ ನಲ್ಲಿ ಊಟಕ್ಕೆಂದು ನಿಲ್ಲಿಸಿದೆವು. ಕರಾವಳಿ ಮಾದರಿಯ ಅಕ್ಕಿರೊಟ್ಟಿ, ಮತ್ತು ಜೋಳದ ರೊಟ್ಟಿ, ಪತ್ರೊಡೇ, ರಾಗಿಮುದ್ದೆ ಊಟ ಗಡದ್ದಾಗಿ ಹೊಡೆದು, ಸಣ್ಣದಾಗಿ ಬೀಡಾ ಜಗಿದು ಸ್ವಲ್ಪ ಹೊತ್ತು ವಿರಮಿಸಿದೆವು. ಅಲ್ಲಿಂದ ಮುಂದೆ ೧೦ ಕೀ ಮೀ ಹೋದರೆ ಕಣ್ವ ಜಲಾಶಯ ಸಿಗುತ್ತದೆ. ಸ್ವಲ್ಪ ಮಟ್ಟಿಗೆ ಕಚ್ಚ ರಸ್ತೆಯಾದರೂ ಬೈಕ್ ಓಡಿಸಲು ಅಡ್ಡಿಯಿಲ್ಲ.
ಕಣ್ವ ಜಲಾಶಯದ ಬಗ್ಗೆ :ಕಣ್ವ ನದಿಗೆ ಅಡ್ಡಲಾಗಿ ೧೯೪೬ ರಲ್ಲಿ ಕಟ್ಟಲಾಯಿತು. ನೀರಾವರಿ ಮತ್ತು ಮೀನುಗಾರಿಕೆ, ತರಬೇತಿ ಇದರ ಮುಖ್ಯ ಉದ್ದೇಶ. ಇದು ಸುಮಾರು ೭೭೫ ಹೆಕ್ಟೇರು ಪ್ರದೇಶವನ್ನು ಆಕ್ರಮಿಸಿದೆ. ಕಣ್ವ ಋಷಿ ಈ ಪ್ರದೇಶದಲ್ಲಿ ತಪ್ಪಸ್ಸು ಮಾಡಿದ್ದರಿಂದ ಕಣ್ವ ನದಿ ಅಂತ ಹೆಸರು ಬಂತು. ಕಣ್ವ ನದಿಯು ಕಾವೇರಿ ನದಿಯ ಉಪನದಿ. ಸುಂದರ ಪ್ರವಾಸಿ ತಾಣ ಹಾಗೂ ಪಕ್ಷಿ ವೀಕ್ಷಕರ ತಾಣ.
ಸಂಜೆಯ ತಂಪಾದ ಗಾಳಿ, ಜನ ದಟ್ಟನೆ ಇಲ್ಲದ ಸುಂದರ ಕಣ್ವ ಜಲಾಶಯ, ನಮ್ಮಲ್ಲಿ ಹಳೆಯ ನೆನಪೆಲ್ಲವನ್ನು ಮತ್ತೆ ಮರಳುವಂತೆ ಮಾಡಿತ್ತು. ಮೊಗೆದಷ್ಟೂ ಮಾತನಾಡುವಷ್ಟು ವಿಷಯಗಳು ನಮ್ಮಲ್ಲಿ ಸುಳಿದಾಡಿದವು. ಎಷ್ಟೋ ಹೊತ್ತು ನಮ್ಮೆಲ್ಲ ಜಂಜಾಟವನ್ನು ಮರೆತು, ಹರಟೆ ನಗುವಿನಲ್ಲಿ ಮುಳುಗಿದ್ದೆವು.
ಪ್ರಪಂಚ ಎಂಬ ಸಾಗರದಲ್ಲಿ ನೀನೊಂದು ಪುಟ್ಟ ಜೀವ.... ನಿನ್ನನ್ನೇ ನಂಬಿದ ನನ್ನೀ ಜೀವಕ್ಕೆ ನೀನೇ ಪ್ರಪಂಚ...!!! ವಿಶಾಲ ಪ್ರಪಂಚದಲ್ಲಿ ನನಗೆ ನಾನೇ ಕಾಣೆಯಾದೆ ಅನ್ನಿಸಿದಾಗ,ಯಾಂತ್ರಿಕತೆಯ ಧಾವಂತದಲ್ಲಿ ಮುಳುಗಿದಾಗ,ನೆನಪಿಸಿಕೊಳ್ಳುವದೇ ಈ ಪುಟ್ಟ ಪ್ರಪಂಚ.
Sunday, September 13, 2009
ಮತ್ತೊಮ್ಮೆ ಮಂಚನಬೆಲೆಗೆ
ನಾವು ಬೈಕ್ ನಲ್ಲಿ ಪ್ರವಾಸ ಹೋಗದೆ ವರ್ಷಗಳೇ ಕಳೆದಿತ್ತು. ಹಾಗಾಗಿ ಈ ವಾರ ಎಲ್ಲಿಗಾದರೂ ಸರಿ ಬೈಕ್ ನಲ್ಲೆ ಹೋಗುವುದೆಂದು ತೀರ್ಮಾನಿಸಿ ಬೆಂಗಳೂರಿಗೆ ಹತ್ತಿರದ ಮಂಚನಬೆಲೆ ಡ್ಯಾಮ್ ಕಡೆಗೆ ಹೊರಟೆವು. ಭಾನುವಾರ (೨೧ ನವೆಂಬರ್ ೨೦೦೯) ಅದೂ ಇದು ಸಣ್ಣ ಪುಟ್ಟ ಕೆಲಸ ಮುಗಿಸಿ ಮೈಸೂರ್ ರೋಡ್ ಸೇರಿಕೊಂಡಾಗ ೧೦.೩೦ ಆಗಿತ್ತು.
ಅಷ್ಟೇನೂ ಟ್ರಾಫಿಕ್ ಇಲ್ಲದ, ಸೂರ್ಯ ಇನ್ನೂ ಕಣ್ಣು ಬಿಡಲೋ ಬೇಡವೋ ಅನ್ನುವಂತಿದ್ದ ವಾತಾವರಣ, ಸ್ವಲ್ಪ ಹುರುಪಿನಿಂದಲೇ ಆಕ್ಸೀಲರೆಟರ್ ಸ್ವಲ್ಪ ಜೋರಾಗಿಯೇ ತಿರುವಿದೆ..ಇನ್ನೇನು ಕೆಂಗೇರಿ ಬಂದೇ ಬಿಟ್ಟಿತು ಅನ್ನುವಷ್ಟರಲ್ಲಿ "ಮಾಮ" ಕೈ ಅಡ್ಡ ತೋರಿಸಿದ...!! ಅಯ್ಯಪ್ಪ ಇದೇನು "ಮಾವಂದಿರು" ಇಷ್ಟು ಬೆಳಗಿನ ಹೊತ್ತಲ್ಲಿ ಅಂದುಕೊಂಡು ಬೈಕ್ ನ ಸೈಡ್ ಗೆ ನಿಲ್ಲಿಸಿದೆ. ನನ್ನ ಹತ್ತಿರ ಎಲ್ಲ ರೆಕಾರ್ಡು ಸರಿಯಾಗಿ ಇದ್ದರಿಂದ ಧೈರ್ಯವಾಗಿ ಮುನ್ನುಗ್ಗಿ ಅವರ ಮುಂದೆ ತೋರಿಸಿದೆ..ಅದರೂ ಮಾಮ ೩೦೦ ರೂಪಾಯಿ ದಂಡ ಕಟ್ಟು ಅಂಥ ಹೇಳಿದರು...ನೋಡಿದರೆ ನಾನು ಓವರ್ ಸ್ಪೀಡ್ ನಲ್ಲಿ ಗಾಡಿ ಓಡಿಸ್ತ ಇದ್ದೆ. ಆರ್ವೀ ಕಾಲೇಜ್ ನಿಂದ ಕೆಂಗೇರಿ ವರೆಗೆ ವೇಗ ಮಿತಿ ೬೦ ಕಿಮೀ. ನಾನು ೬೨ ಕಿಮೀ ವೇಗದಲ್ಲಿದ್ದೆ..!! ತೆಪ್ಪಗೆ ದಂಡ ಕಟ್ಟಿ ಮನಸ್ಸಿನಲ್ಲಿಯೇ ಬೈದು ಕೊಂಡು ಪ್ರಯಾಣ ಮುಂದುವರೆಸಿದೆ.
Subscribe to:
Post Comments (Atom)
2 comments:
ಪ್ರಶಾಂತ್...
ಸೊಗಸಾದ ಫೋಟೊಗಳೊಂದಿಗೆ
ಚೊಕ್ಕದಾದ ವಿವರಣೆ...
ಹೊಟ್ಟೆಕಿಚ್ಚು ತರಿಸುವಂತಿದೆ...
ಚಂದದ ಫೋಟೊಗಳಿಗೆ ವಿವರಣೆಗಳಿಗೆ ಅಭಿನಂದನೆಗಳು....
ಹಾಯ್ ಪ್ರಕಾಶಣ್ಣಾ,
ನಿಜ, ಅದೊಂದು ಚಿಕ್ಕ ಪ್ರವಾಸ, ತುಂಬಾ ಸುಂದರ ಪರಿಸರ ಕೂಡ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು :-)
-ಪ್ರಶಾಂತ್ ಭಟ್
Post a Comment