ತುಂಬ ದಿನಗಳ ನಂತರ ಎಲ್ಲರೂ ಸೇರಿ ಪ್ರವಾಸ ಹೋಗುವುದೆಂದು ತೀರ್ಮಾನ ಮಾಡಿದ.
ಅದರಂತೆ ಡಿಸೆಂಬರ್ ೨೦ ರಂದು ಮುಂಜಾನೆ ೩.೩೦ ಕ್ಕೆ ಬೆಂಗಳೂರು ಬಿಟ್ಟು ಮೈಸೂರ್ ದಾರಿ ಹಿಡಿದೆವು.ಬೆಳಿಗ್ಗೆ ಬೆಳಿಗ್ಗೆ ಸಕತ್ ಛಳಿ, ಇಬ್ಬನಿ, ೫ ಜನ ಗೆಳೆಯರು, ೧ ಝೆನ್ ಕಾರು.....!!ಡಿಂಗ ಸ್ವಲ್ಪ ಮುನಿಸಿಕೊಂಡು ಬಿಟ್ಟಿದ್ದ...!! ಅವನ ಕೋಪ ಶಮನಕ್ಕೆ ತಣ್ಣಗಿನ "ಯುಬೀ ನೀರು" ಬೇಕಾಯ್ತು.
ಪ್ಲಾನ್ ಪ್ರಕಾರ ನಾವು ಬೆಳಿಗ್ಗೆ ೭ ಗಂಟೆಗೆ "ನಾಗರಹೊಳೆ" ಅಭಯಾರಣ್ಯವನ್ನ ಪ್ರವೇಶ ಮಾಡಿದೆವು. ಆನೆ, ಕಾಡು ಜಿಂಕೆ ಬಿಟ್ಟರೆ ಬೇರ್ಯಾವುದೇ ಕಾಡು ಪ್ರಾಣಿ ನಮಗೆ ಎದುರಾಗಲಿಲ್ಲ....ಮತ್ತೆ ಸ್ವಲ್ಪ ನಿರಾಶೆ ಎಲ್ಲರ ಮುಖದಲ್ಲಿ...ದೂದ್ ಪೇಡ ಸ್ವಲ್ಪ ಖುಷಿ ಯಲ್ಲಿದ್ದ.......! ಝೆನ್ ಕಾರು ೮೦ ಕಿ. ಮೀ. ಕ್ಕೂ ಜಾಸ್ತಿ ಸ್ಪೀಡ್ನಲ್ಲಿ ಹೋಗ್ತಾ ಯಿತ್ತು...!!! ಗಡಿಭಾಗದ "ಕುಟ್ಟ" ಪಟ್ಟಣ ತಲುಪಿದಾಗ ೮.೩೦ ಆಗಿತ್ತು. ಡಿಂಗ ಮೊದಲೇ "ನಾರಿಕಡಿ " ಹೋಂ ಷ್ಟೇ ಬುಕ್ ಮಾಡಿದ್ದ. ಸುಂದರ ಕಾಫಿ ಎಸ್ಟೇಟ್ ಮಧ್ಯದಲ್ಲಿ, ಕೊಡವ ಮನೆತನದವರು ಪ್ರೀತಿಯಿಂದ, ಆದರದಿಂದ ಕೂಡಿದ ಸತ್ಕಾರ ನಿಜಕ್ಕೂ ಗ್ರೇಟ್...!! ತುಂಬಾ ಯಿಷ್ಟ ಆಗುತ್ತೆ...!!ಉಪಾಹಾರ ನಿಮಿತ್ತ ಮಾಡಿದ್ದು ರೊಟ್ಟಿ, ಪಲ್ಯ, ಜಾಮ್, ತುಪ್ಪ, ಬ್ರೆಡ್ ಅಮ್ಲೆಟ್, ಎಗ್ಗ್ ಕರಿ, ಶಾವಿಗೆ ಉಪ್ಪಿಟ್ಟು. ..ಬಿಸ್ಸಿ ಬಿಸ್ಸಿ ಕಾಫಿ..!! ಬಾಳೆಹಣ್ಣು...!
ಅಲ್ಲಿಂದ ಸೀದಾ ಹೊರಟಿದ್ದು ತಿರುನೆಲ್ಲಿ ದೇವಸ್ಥಾನಕ್ಕೆ. ಪ್ರಕೃತಿಯ ಮಡಿಲಲ್ಲಿರುವ, ಹಸಿರು ಬೆಟ್ಟಗಳ ಮಧ್ಯೆ ಸಾಗಿ, ದೇವರ ದರ್ಶನ ಕಿಟಕಿಯಿಂದಲೇ ಮಾಡಿದೆವು...!! ದೇವಸ್ಥಾನದ ಪುನರುತ್ಥಾನ ಕೆಲಸ ಕಾರಣದಿಂದ ದರ್ಶನ ಭಾಗ್ಯ ಸಿಗಲಿಲ್ಲ.
"ಎಡಕಲ್ಲು ಗುಡ್ಡ" ತಲುಪಿದಾಗ ಮಧ್ಯಾನ್ಹ ೧೨.೩೦, ತುಂಬ ಬಿಸಿಲು ಇದ್ದ ಕಾರಣ ಯಾರು ಬೆಟ್ಟ ಹತ್ತುವ ಧೈರ್ಯ ಮಾಡಲಿಲ್ಲ.....!! ದೂದ್ ಪೇಡ ಸುಮ್ಮನಿದ್ದ......!!! ಬೆಟ್ಟ ಹತ್ತುವುದರಲ್ಲಿ ನಮ್ ಟೀಂ ನಲ್ಲಿ ಅವನದು ಎತ್ತಿದ ಕೈ.(ಕಾಲು)..
ಸ್ವಲ್ಪ ವಿಚಾರ ವಿಮರ್ಶೆ, ಘರ್ಷಣೆ ನಂತರ ಡಿಂಗ "ಸೂಚಿಪ್ಪರ" ಜಲಪಾತಕ್ಕೆ ಹೋಗಲು ಒಪ್ಪಿದ. ಅಲ್ಲಿಗೆ ಹೋಗಿಲ್ಲದಿದ್ದರೆ ನಾವು ನಿಜವಾದ ಕೇರಳ ಸೌಂದರ್ಯ ಮಿಸ್ ಮಾಡಿಕೊಳ್ತಾ ಯಿದ್ವಿ.... "ಹ್ಯಾರಿಸೋನ್ ಮಲಯಾಳಂ ಟೀ ಎಸ್ಟೇಟ್ " ಒಂದು ನಿಸರ್ಗ ರಮಣೀಯ ಪ್ರದೇಶ...ಎಲ್ಲೆಲ್ಲೂಹಸಿರು ಹಸಿರು ಬೆಟ್ಟಗಳು...!! ವಾಹ್....!! ಮಧ್ಯೆ ಜಲಪಾತ..!!! ಅಲ್ಲಿ ಡ್ರೈವ್ ಮಾಡುವುದೇ ಖುಷಿ..!!ಡಿಂಗ ಈಗ ಸ್ವಲ್ಪ ಸಮಾಧಾನದಲ್ಲಿದ್ದ..!!!ಸುಚಿಪ್ಪರ ಜಲಪಾತ ನೋಡಲು ಲೋಕಲ್ ಜೀಪ್ ಮಾಡಿಕೊಂಡು ಹೀಗೆ ಹೋಗಿ ಹಾಗೆ ನೋಡಿಕೊಂಡು ಬಂದ್ವಿ....!! ತೆಗದುಕೊಂಡ ಸಮಯ ಬರೋಬ್ಬರಿ ೨೦ ನಿಮಿಷಗಳು...!!!! ಕಾರಣ ಡಿಂಗನ ಅವಸರ...!! ಮುಂದಿನ ಕಾರ್ಯಕ್ರಮಕ್ಕೆ ಅಡಚಣೆ, ವಿಳಂಬ ಆಗಬಾರದೆಂಬ ಬಯಕೆ...!!! ಜಲಪಾತ ನಿಜಕ್ಕೂ ಸುಂದರವಾಗಿದ್ದು...ಜಲಕ್ರೀಡೆಗೆ ಸೂಕ್ತವಾದ, ಕುಟುಂಬ, ಗೆಳೆಯರು, ಒಮ್ಮೆ ನೋಡಲೇಬೇಕಾದ ಜಾಗ.ಸತತ ೨ ಗಂಟೆಗಳ ಡ್ರೈವ್ ಮಾಡಿ ಎಲ್ಲರನ್ನು home stay ವಾಪಾಸ್ ಕರೆತಂದಾಗ ೮.೩೦ ಆಗಿತ್ತು.
ಒಳ್ಳೆ ಊಟ, ಫೈರ್ ಕ್ಯಾಂಪ್...ಹಾಡು, ಕುಣಿತ... ಒಟ್ಟಾರೆ Rocking !!
ಒಳ್ಳೆ ಊಟ, ಫೈರ್ ಕ್ಯಾಂಪ್...ಹಾಡು, ಕುಣಿತ... ಒಟ್ಟಾರೆ Rocking !!
ಮರುದಿನ ೨೧ ಡಿಸೆಂಬರ್ ಸಂಡೇ....ಇಬ್ಬನಿ ಹಿತವಾಗಿ ಯಿದ್ದರಿಂದ ಹೂವಿನ ಅಂದ ಹೆಚ್ಚ್ಚಿತ್ತು...!! ಪ್ರತಿ ಸಲದಂತೆ ಈ ಬಾರಿಯೂ ನನ್ನ ಫೋಟೋ ತೆಗೆಯುವ ಕೆಲಸ ಮುಂದುವರೆಸಿದೆ...!!.....ಈ ಸಲ ಫೋಟೋಕ್ಕೆ ಅರವಿಂದ ಮೆಚ್ಚುಗೆ ಹೇಳಿದ, ಮುಂದಿನ ಪ್ರವಾಸಗಳಲ್ಲಿ ಇನ್ನೂ ಹೆಚ್ಚಿನ ತೊಂದರೆ ಕೊಡುವ ನಿರ್ಣಯ ತೆಗೆದುಕೊಂಡೆ..!!
ಬನವಾಸಿ, ಅರವಿಂದ, ದೂದ್ ಎಲ್ಲ ತುಂಬ ಜೋಶ್ ನಲ್ಲಿ ಇದ್ರು...ಬೆಳಗ್ಗೆ ಬೆಳಗ್ಗೆ ಬ್ಯಾಡ್ಮಿಂಟನ್ ಆಟ ಶುರುಮಾಡಿ ಬಿಟ್ಟಿದ್ರು.. !! ಸತತ ೨ ತಾಸು ಆಡಿ, ಮೈಕೈ ಎಲ್ಲ ನೋವು ಮಾಡಿಕೊಂಡು....ತಿಂಡಿ ಸಮಯಕ್ಕೆ ಭರ್ಜರಿ ಬ್ಯಾಟಿಂಗ್ ಮಾಡ್ಬಿಟ್ರು...!!!
ಯಿರ್ಪು ಜಲಪಾತಕ್ಕೆ ಹೊರಟಾಗ ಕಾರ್ ನ ಟೈರ್ ಪಂಕ್ಚರ್ ಆಗಿತ್ತು. ೪ ಜನ ಧಾನ್ಡಿಗರನ್ನ ಹೊತ್ತು ಅದಕ್ಕೂ ಸಾಕಾಗಿರಬೇಕು...ಪಾಪ...!ಯಿರ್ಪು ಜಲಪಾತ ದಲ್ಲಿ ನೀರಿನ ಸೆಳೆತಕ್ಕೆ ಮೈ ಒಡ್ಡಿ ನಿಂತು, ನೀರಲ್ಲಿ ಆಟ ಆಡಿ, ಸಕತ್ ಮಜ ಬಂತು.ಅಲ್ಲಿಂದ ಹೊರಟು ಮಧ್ಯಾನ್ನ ದಾಭಾ ನಲ್ಲಿ ಊಟ ಮಾಡಿದ್ವಿ.
home stay ವಾಪಾಸ್ ಬಂದು ಬಟ್ಟೆ ಬರೆ ಎಲ್ಲ ಪ್ಯಾಕ್ ಮಾಡಿ, ಮಾಲೀಕರಿಗೆ ಒಂದು ಥ್ಯಾಂಕ್ಸ್ ಹೇಳಿ ಅಲ್ಲಿಂದ ಹೊರೆಟೆವು. ಅಂದದೂರು ಬೆಂಗಳೂರಿಗೆ ವಾಪಾಸ್ ಬಂದಾಗ ಸಂಜೆ ೮ ಗಂಟೆ.
home stay ವಾಪಾಸ್ ಬಂದು ಬಟ್ಟೆ ಬರೆ ಎಲ್ಲ ಪ್ಯಾಕ್ ಮಾಡಿ, ಮಾಲೀಕರಿಗೆ ಒಂದು ಥ್ಯಾಂಕ್ಸ್ ಹೇಳಿ ಅಲ್ಲಿಂದ ಹೊರೆಟೆವು. ಅಂದದೂರು ಬೆಂಗಳೂರಿಗೆ ವಾಪಾಸ್ ಬಂದಾಗ ಸಂಜೆ ೮ ಗಂಟೆ.
ಒಟ್ಟು ಪ್ರಯಾಣ - ೫೮೫ ಕಿ. ಮೀ.
1 comment:
ಪ್ರಶಾಂತ್,
ಬ್ಲಾಗ್ ಮತ್ತು ಬರವಣಿಗೆ ಎರಡೂ ಚೆನ್ನಾಗಿದ್ದು.
ಹಾಡಿ ಹಾಡಿ ರಾಗ ಅಂದ ಹಂಗೇ, ನಾವು ಬರೆದಷ್ಟೂ ನಮ್ಮ ಬರವಣಿಗೆ ಪಕ್ವ ಆಗ್ತು. ಹೊಸ ಹೊಸ ಜಾಗಗಳಿಗೆ ಹೋದಾಗ ಆಗುವ ಅನುಭವವನ್ನು ಮನಸ್ಸಲ್ಲಿ ಹಿಡಿದಿಟ್ಟು ವಿಭಿನ್ನ ಶೈಲಿಯಲ್ಲಿ ಬರಿ. ಎಲ್ಲೋ ಆಗ್ಗಾಗ್ಗೆ ಓದಿದಾಗ ಅದರ ಸವಿನೆನಪಾಗ್ತು.
Post a Comment