Thursday, January 29, 2009

ಹೊಸ ವರ್ಷದ ಆಚರಣೆ...೨೦೦೯.

ಪ್ರತೀ ವರ್ಷದ ಕೊನೆಯ ದಿನ ಬೆಂದಕಾಳುರನ್ನು ಬಿಟ್ಟು, ಯಾವುದಾದರೊಂದು ಸ್ಥಳಕ್ಕೆ ಪ್ರವಾಸ ಕೈಗೊಂಡು ಹೊಸ ವರ್ಷವನ್ನು ಸ್ವಾಗತಿಸುವುದು ನಮ್ಮ ಅಭ್ಯಾಸವಾಗಿತ್ತು.


ಆದ್ರೆ ಈ ಸಲ ಡಿಸೆಂಬರ್ ೩೧ ಬುಧವಾರ ಬಂದಿದ್ದು, ಗುರುವಾರ ಆಫೀಸ್ ಗೆ ರಜ ಇಲ್ಲದ ಕಾರಣ ನಮ್ಮ ಪ್ರವಾಸ ಕ್ಯಾನ್ಸಲ್ ಆಗಿತ್ತು.ಬುಧವಾರ ಸಂಜೆಯತನಕ ಎಲ್ಲರೂ ಅವರವರ ಮನೆಯಲ್ಲಿ ಹೊಸ ವರ್ಷದ ಆಚರಣೆ ಅಂಥ ತೀರ್ಮಾನ ಮಾಡಿದ್ದೆವು. ಡಿಂಗನಿಗೆ ಆಫೀಸ್ನಲ್ಲಿ ನೈಟ್ ಶಿಫ್ಟ್ ಬೇರೆ...!!! ಹೋಗಲೇ ಬೇಕೆಂದು ದೂದ್ ಆಫೀಸ್ ಗೆ ರಜ ಹಾಕಿದ್ದ..!!! ನಾವೆಲ್ಲ ಬರೋಲ್ಲ ಅಂಥ ಹೇಳಿದಾಗ ಸಿಕ್ಕಾಪಟ್ಟೆ ಕೋಪ ಬಂದಿತ್ತು ಅವನಿಗೆ....!!! No Much happening this year end.. :-(

ಸಂಜೆ ನಾನು ಮನೆಗೆ ವಾಪಾಸ್ ಹೋಗ್ತಾಯಿರೋವಾಗ ಡಿಂಗ ಫೋನ್ ಮಾಡಿದ...!! ಇವತ್ತು ಆಫೀಸ್ ಇಂದ ಬೇಗ ಬರ್ತಾ ಇದೀನಿ, ನ್ಯೂ ಇಯರ್ ಪಾರ್ಟಿ ಗೆ ರೆಡಿ ಮಾಡು ಅಂದ.

Happening begins...!! :-)

ಸೊ ನಾನು ಗಡಿಬಿಡಿಯಲ್ಲಿ ಅರವಿಂದನಿಗೆ, ದೂದ್ಗೆ ಫೋನ್ ಮಾಡಿದೆ...ಸೀದಾ ನಮ್ಮ ಮನೆಗೆ ಬನ್ನಿ ಅಂಥ...! ದೂದ್ ಮೊದಲು ನಂಬಲಿಲ್ಲ, ಕೊನೆಗೆ ಅವನೇ ಮೊದಲು ಬಂದಿದ್ದು...!
ನಾನು ಸ್ವಲ್ಪ ತರಕಾರಿ ತಗೊಂಡು ಮನೆಗೆ ಹೋದೆ....! ಅರವಿಂದ + ಅರವಿಂದ ( ಡಿಂಗ ನ ಕಸಿನ್ ಬ್ರದರ್)(ಅಭಿ - ಅವನ ಶಾರ್ಟ್ ನೇಮು) ಸರಿಯಾದ ಸಮಯಕ್ಕೆ ಮನೆಗೆ ಬಂದ್ರು..ಎಲ್ಲ ಸೇರಿ ಪ್ಲಾನ್ ರೆಡಿ ಮಾಡಿದ್ವಿ.ನಾನು ಮತ್ತೆ ದೂದ್ ಹೋಗಿ ಕೇಕ್ ತಂದ್ವಿ...ಅವತ್ತಿನ ದಿನ ಎಲ್ಲ ಬೇಕರಿ ಅಂಗಡಿ ಫುಲ್ ರಷ್ಯು..!!ಅಭಿ ಒಂದಷ್ಟು ದಿಢೀರ್ ತಿಂಡಿ ರೆಡಿ ಮಾಡಿದ...! ನಾನು ಚಿತ್ರಾನ್ನ ಕಲಸಿದೆ...( ೮ ವರ್ಷದ ಅನುಭವ ಇದೆ)

ಡಿಂಗ ಮನೆಗೆ ಬಂದಾಗ ೧೦ ಗಂಟೆ ಆಗಿತ್ತು. ಎಲ್ಲರೂ ಸೇರಿ ಪಾನೀಯ ಸೇವಿಸಿ, ತಿಂಡಿ ತಿಂದು ಮೊದಲ ಹಂತದ ಕೊನೆಗೆ ಬಂದಿದ್ದೆವು...

ಸರಿಯಾಗಿ ೧೨ ಗಂಟೆಗೆ ಕೇಕ್ ಕಟ್ ಮಾಡಿ, ಎಲ್ಲರಿಗೂ ವಿಶ್ ಮಾಡಿದ್ವಿ...!! ಅರವಿಂದ ಸ್ವಲ್ಪ ಜೋಶ್ ನಲ್ಲೆ ಇದ್ದ...ಇದು ಅವನ ಕೊನೆಯ ಅವಿವಾಹಿತ ಹೊಸ ವರ್ಷದ ಆಚರಣೆ..!! ಹೊಟ್ಟೆ ತುಂಬಾ ಊಟ ಮಾಡಿ ಮಲಗಿದಾಗ ಗಂಟೆ ೩... !! ಇರೋದ್ರಲ್ಲೇ ಸಕತ್ ಮಜ ಇತ್ತು..!

೧ ನೆ ತಾರೀಕು ಆಫೀಸ್ ಗೆ ಬರಲೇ ಬೇಕಿತ್ತು...., ಅರವಿಂದ ಅವತ್ತಿಂದ ಇವತ್ತಿನ ತನಕ ವಟಗುಟ್ಟುತ್ತಲೇ ಇದ್ದಾನೆ... " ಮಕ್ಕಳ್ರಾ, ನ್ಯೂ ಇಯರ್ ದಿನ ಎಲ್ಲೂ ಹೋಗಿಲ್ಲ, ಸೊ ವರ್ಷ ಪೂರ್ತಿ ಎಲ್ಲೂ ಹೋಗಕೆ ಆಗೋಲ್ಲ...!!"ಸ್ವಲ್ಪ ನಿಜ ಇದ್ರೂ ಇರಬಹುದು...!! ಮೊನ್ನೆ ೪ ದಿನ ಲಾಂಗ್ ವೀಕೆಂಡ್ ಇದ್ರೂ ನಮಗೆ ಎಲ್ಲೂ ಹೋಗಲಾಗಲಿಲ್ಲ...!!ನೋಡೋಣ....ಉಳಿದ ದಿನಗಳು ಇನ್ನೂ ೩೩೬..!

No comments: