ನಿತ್ಯಕರ್ಮ ಮುಗಿಸಿ, ಸ್ವಲ್ಪ ಲೈಟ್ ಆಗಿ ತಿಂಡಿ ತಿಂದು ಬೆಂಗಳೂರ್ ಟೈಮ್ಸ್ ಓದುತ್ತ ಕುಳಿತಿದ್ದೆ. ನಂಗೆ ಇಷ್ಟವಾದ ಹರಿಹರನ್ ಗಝಲ್ ಮ್ಯೂಸಿಕ್ ಸಿಸ್ಟಮ್ ಇಂದ ಕೇಳಿಬರ್ತಿತ್ತು. ಅಂದು ಯಾವುದೇ ಪರ್ಸನಲ್ ಕೆಲಸ ಇರಲಿಲ್ಲ. ಹೊರಗಡೆ ಮೋಡ ಕವಿದ ವಾತಾವರಣ. ಸಣ್ಣಗೆ ತುಂತುರು ಮಳೆ ಕೂಡ ಬಂದು ಹೋಗಿತ್ತು. ಹಾಗೆ ಸುಮ್ಮನೆ ಒಂದು ರೌಂಡು ಲಾಂಗ್ ಡ್ರೈವ್ ಹೋಗಲು ಮನಸ್ಸಾಯಿತು. "ಸ್ವೀಟಿ" ಯನ್ನ ಮನೆಗೆ ತಂದು ಒಂದು ವಾರವಷ್ಟೇ ಆಗಿತ್ತು. ಮಂಚನಬೆಲೆ ಡ್ಯಾಮ್ ಬಗ್ಗೆ ನಾವೆಲ್ಲ ಕೇಳಿದ್ದೆವು, ಅಲ್ಲಿಗೇ ಹೋಗುವುದೆಂದು ತೀರ್ಮಾನಿಸಿ, ಮಧ್ಯಾನ್ಹ ೧೧ ಗಂಟೆಗೆ, ನಾನು, ಬನವಾಸಿ, ಅಭಿ, ದೂದ್, ಸ್ವೀಟಿ ಮೈಸೂರ್ ರೋಡ್ ಕಡೆಗೆ ಹೊರಟೇ ಬಿಟ್ಟೆವು. ಸ್ವೀಟಿ ಗೆ ಇದು ಮೊದಲ ಟ್ರಿಪ್ಪು. ಅರವಿಂದ ಅಮೇರಿಕಾ ಪ್ರವಾಸದಲ್ಲಿದ್ದ.
ಮೈಸೂರ್ ರೋಡ್ ನಲ್ಲಿ ಟ್ರಾಫಿಕ್ ಸ್ವಲ್ಪ ಕಡಿಮೆಯೇ ಇತ್ತು. ಕಪ್ಪು ಬಣ್ಣದ ಕಾರ್ಮೋಡಗಳು ಎಲ್ಲ ಕಡೆ ತುಂಬಿತ್ತು. ಬೆಂಗಳೂರಿಂದ ಸುಮಾರು ೫೦ ಕಿ. ಮೀ. ದೂರದಲ್ಲಿರುವ " ಕಾಮತ್ ಉಪಚಾರ್" ನಲ್ಲಿ ಮಧ್ಯಾನ್ಹದ ಊಟ ಮಾಡಿದ್ವಿ. ನವಿರಾದ ಜೋಳದ ರೊಟ್ಟಿ, ಎಣಗಾಯಿ ಪಲ್ಲ್ಯ, ಕಾಳು ಪಲ್ಯ, ಕೆಂಪ್ ಚಟ್ನಿ, ಗಟ್ಟಿ ಮೊಸರು, ಗುರೆಳ್ಳು, ಶೇಂಗ ಚಟ್ನಿ ಇವಿಷ್ಟು ಊಟದ ಮೆನು. ಭರ್ಜರಿ ಊಟ ಮಾಡಿ ರಾಮನಗರ ದಿಂದ ಎಡಕ್ಕೆ ತಿರುಗಿ ಮಂಚನಬೆಲೆ ಕಡೆಗೆ ಹೊರಟೆವು.
ಮೋಡ ಸ್ವಲ್ಪ ತಿಳಿಯಾಗಿತ್ತು. ರಸ್ತೆಯ ಅಕ್ಕ ಪಕ್ಕ ಹಸಿರು ಅಡಿಕೆ ಮತ್ತು ತೆಂಗಿನ ತೋಟ ಇದೆ.
ಮಂಚನಬೆಲೆ ಡ್ಯಾಮ್ ಬಗ್ಗೆ...
ಬೆಂಗಳೂರಿಂದ ಸುಮಾರು ೪೦ ಕಿ. ಮೀ. ದೂರದಲ್ಲಿ , ರಾಮನಗರ ಜಿಲ್ಲೆಯಲ್ಲಿರುವ ಈ ಜಲಾಶಯ ಮಾಗಡಿ ತಾಲೂಕಿಗೆ ನೀರಾವರಿಗೋಸ್ಕರ ಕಟ್ಟಲಾಗಿದೆ. ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಲಾದ ಈ ಜಲಾಶಯದ ಸುತ್ತಮುತ್ತ ವಿವಿಧ ಬಗೆಯ ಹಕ್ಕಿಗಳು ಕಾಣಿಸುತ್ತವೆ. ಡ್ಯಾಮ್ ನ ಮೇಲೆ ಹೋಗುವುದನ್ನು ನಿಷೇಧಿಸಲಾಗಿದೆ. ಈ ಸುಂದರ ಪರಿಸರ ವೀಕೆಂಡ್ ಕಳೆಯಲು ಸೂಕ್ತವಾಗಿದೆ. ಜೋಡಿ ಹಕ್ಕಿಗಳು ಕಾಲಕಳೆಯಲು ಇಲ್ಲಿಗೆ ಬರುವುದು ಸಾಮಾನ್ಯ.
ಸಂಜೆಯಾಗುತ್ತಾ ಇದ್ದರಿಂದ ನಾವ್ಯಾರೂ ನೀರಿಗೆ ಇಳಿಯಲಿಲ್ಲ. ದಡದಲ್ಲಿ ಕೂತು ಅಲ್ಲಿನ ಸೌಂದರ್ಯವನ್ನು ನೋಡಿದೆವು. ದೂದ್ ಮತ್ತು ಅಭಿ ಅಲ್ಲೇ ಪಕ್ಕದಲ್ಲಿದ್ದ ಕಲ್ಲಿನ ಬೆಟ್ಟ ಹತ್ತಿ, ಸಣ್ಣ ಟ್ರೆಕ್ಕಿಂಗ್ ಮಾಡಿದರು.
2 comments:
hey Prashantha.. super photos :)) tumba khushi aatu.. yastu fresh fresh anistu photos nodidre.. nanu alligella hogavu :))
Ennu yalla odidille.. complate odida mele comments hakutte..
-Pavana
Thanks Paavana..
Ninna comments sakat inspirations...!!
Post a Comment